

2nd January 2026

ಕುಷ್ಟಗಿ : ಇಂದಿನ ಕಾಲದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದ್ದು ಉನ್ನತ ಶಿಕ್ಷಣವನ್ನು ಮಕ್ಕಳಿಗೆ ಕೊಡುವುದುರ ಜೊತೆಗೆ ನಿಮ್ಮ ಕುಲಕಸುಬುಗಳ ಬಗ್ಗೆ ಅರಿವು ಮೂಡಿಸುವುದನ್ನು ಮರೆಯಬಾರದೆಂದು ಕಾಂಗ್ರೆಸ್ ಯುವ ಮುಖಂಡರಾದ ದೊಡ್ಡಬಸವನಗೌಡ ಪಾಟೀಲ್ ಬಯ್ಯಾಪುರ ಹೇಳಿದರು.
ತಾಲೂಕ ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಹಾಗೂ ಮೌನೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವಕರ್ಮ ಸಮಾಜದ ಕುಲಕಸುಬುಗಳು ಎಂದಿಗೂ ಶಾಸ್ವತವಾಗಿರುತ್ತವೆ. ಕುಲಕಸುಬುಗಳ ಬಗ್ಗೆ ತಮಗೆ ಕೀಳರಿಮೆ ಬರುವುದು ಬೇಡ. ಯಾವುದೇ ಸಮಾಜದವರೇ ಆಗಿರಲಿ ಆರ್ಥಿಕವಾಗಿ ಬಡತನವಿದ್ದರೂ ಜ್ಞಾನದಲ್ಲಿ ಬಡತನ ಇರಬಾರದು. ಆಧುನಿಕತೆಗೆ ತಕ್ಕಂತೆ ಜೀವನ ಮಾಡಬೇಕು. ತಂತ್ರಜ್ಞಾನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪುರಾತನ ಕಾಲದಲ್ಲಿ ಶಿಲ್ಪಿಗಳು ನೂರಾರು ದಿನಗಳ ಕಾಲ ಕೆತ್ತನೆ ಮಾಡಿ ರೂಪವನ್ನು ಕೊಡಬೇಕಾಗಿತ್ತು. ಅಂದಿನ ಕಾಲದಲ್ಲಿ ಯಾವುದೇ ಯಂತ್ರಗಳು ಸಹ ಇರಲಿಲ್ಲ. ಅಂತಹ ಕಾಲದಲ್ಲಿ ಜಕಣಾಚಾರಿಯವರ ಶಿಲ್ಪಕಲೆಗಳು ಇಂದಿಗೂ ಜಗತ್ತಿಗೆ ಮಾದರಿಯಾಗಿವೆ. ಅವರು ನೀಡಿದ ಶಿಲ್ಪಕಲಾ ಕೊಡುಗೆಗಳು ಅಮರವಾಗಿದ್ದು ಅಮರಶಿಲ್ಪಿ ಜಕಣಾಚಾರಿಯಾಗಿ ಯಾಗಿ ಇಂದಿಗೂ ಎಂದಿಗೂ ಎಲ್ಲರ ಮನದಲ್ಲಿ ಉಳಿದಿದ್ದಾರೆ ಎಂದರು.
ನಂತರ ತಾಲೂಕಾ ಅಧ್ಯಕ್ಷ ಶರಣಪ್ಪ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು. ಮಕ್ಕಳಿಗೆ ವಿಶ್ವಕರ್ಮ ಬಾಂಧವರು ಉತ್ತಮ ಶಿಕ್ಷಣ ಕೊಡಿಸಿ ಶಿಕ್ಷಣವಂತರಾಗಬೇಕು. ಸಮಾಜದಲ್ಲಿ ಸಂಘಟನೆಯ ಕೊರತೆ ಇದ್ದು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಸರಕಾರದ ಸೌಲಭ್ಯ ಪಡೆಯಲು ನಮ್ಮ ಸಮಾಜದವರು ಸಂಘಟಿತರಾಗಬೇಕು ಎಂದರು.
ಶಿಕ್ಷಕ ರಾಮಚಂದ್ರಪ್ಪ ಬಡಿಗೇರ ಅವರು ಉಪನ್ಯಾಸ ನೀಡಿ, ಕಾಯಕ ಸಂಸ್ಕೃತಿ ಹುಟ್ಟಿದ್ದು ವಿಶ್ವಕರ್ಮ ಸಮಾಜದಿಂದ, ದೇಶದಲ್ಲಿ ನಿರ್ಮಿಸಿರುವ ಶಿಲ್ಪ ಕಲೆಗೆ ಜಕಣಾಚಾರಿ ಅವರ ಕೊಡುಗೆ ಅಪಾರವಿದೆ. ಯಾವುದೇ ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಓರ್ವ ಸಾಮಾನ್ಯ ವಿಶ್ವಕರ್ಮ ಸಮಾಜದ ವ್ಯಕ್ತಿ ಸುಂದರ ಕಲಾಕೃತಿಗಳನ್ನು ನಿರ್ಮಿಸಿರಿವುದು ಈಗ ದೊಡ್ಡ ಶಕ್ತಿ ಆಗಿದ್ದಾರೆ. ಶತಮಾನ ಕಳೆದರು ಅಚ್ಚಳಿಯದೆ ಉಳಿದಿರುವ ಜಕಣಾಚಾರಿ ಅವರು ಈ ಜಗತ್ತಿಗೆ ನೀಡಿದ ಶಿಲ್ಪಕಲೆ ಅಜರಾಮರವಾಗಿದೆ ಎಂದರು.
ಶಿಕ್ಷಕ ನಟರಾಜ ಸೋನಾರ ಮಾತನಾಡಿ ಶ್ರೀ ಮೌನೇಶ್ವರ ವಚನಗಳು ಅಲ್ಲಮಪ್ರಭು ವಚನಗಳಿಗೆ ಸಮವಾಗಿವೆ. ಹಿಂದೂ ಮುಸ್ಲಿಂ ಭಾವೈಕ್ಯತೆಯ ಶರಣರು, ಕಂಬಳಿ ಬಿಸಿ ಮಳೆ ತರಿಸಿರುವ ಪವಾಡ ಪುರುಷ ಮೌನೇಶ್ವರರು ಎಂಬ ಪ್ರತಿತಿ ಇದೆ. ಇಂತಹ ಮಹಾನ್ ಶರಣ ತಿಂಥಣಿ ಮೌನೇಶ್ವರ ತತ್ವಗಳನ್ನು, ಜಕಣಾಚಾರಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಇದಕ್ಕೂ ಮೊದಲು ಅಮರಶಿಲ್ಪಿ ಜಕಣಾಚಾರಿ ಹಾಗೂ ಶ್ರೀ ಮೌನೇಶ್ವರರ ಭಾವಚಿತ್ರ ಮೆರವಣಿಗೆಯು ಹನಮಸಾಗರದ ವಿಶ್ವಕರ್ಮ ಸಮಾಜದ ಮಹಿಳಾ ಭಜನಾ ಮಂಡಳಿಯವರಿಂದ ಭಕ್ತಿ, ಭಜನಾಗೀತೆಗಳ ಜೊತೆಗೆ ಕುಂಭಹೊತ್ತ ಮಹಿಳೆಯರಿಂದ ಕುಷ್ಟಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭದಲ್ಲಿ ಎ. ತೀರ್ಥಂದ್ರ ಮಹಾಸ್ವಾಮಿಗಳು, ನಾಗಮೂರ್ತೆಂದ್ರ ಮಹಾಸ್ವಾಮಿಗಳು, ದಿವಾಕರ ಮಹಾಸ್ವಾಮಿಗಳು, ನರಸಿಂಹಚಾರ್ಯರು, ಹಿರಿಯ ಮುಖಂಡರಾದ ಮಾಜಿ ಜಿಲ್ಲಾಧ್ಯಕ್ಷರಾದ ನಾಗಲಿಂಗಪ್ಪ ಪತ್ತಾರ, ಈಶಪ್ಪ ಬಡಿಗೇರ, ಜಿಲ್ಲಾ ಕಾರ್ಯದರ್ಶಿ ರುದ್ರಪ್ಪ ಮಾಸ್ತರ್, ಸಹಕಾರ ರತ್ನ ಪುರಸ್ಕೃತ ಮಾಹಾಲಿಂಗಪ್ಪ ದೋಟಿಹಾಳ, ವಿಶ್ವಕರ್ಮ ನಿಗಮದ ಜಿಲ್ಲಾ ನಿರ್ದೇಶಕ ದೇವೇಂದ್ರ ಬಡಿಗೇರ, ಶಿರಗುಂಪಿ ಗ್ರಾ.ಪಂ. ಅದ್ಯಕ್ಷೆ ಸವಿತಾ ಕಾಳೇಶ ಬಡಿಗೇರ, ಮಹಾದೇವಪ್ಪ ಕಮ್ಮಾರ, ನಗರ ಘಟಕದ ಅಧ್ಯಕ್ಷ ಸಿದ್ದಪ್ಪ ಬಡಿಗೇರ, ಮಾಜಿ ಅಧ್ಯಕ್ಷ ಗುರಪ್ಪ ಬಡಿಗೇರ, ರಾಮಚಂದ್ರಪ್ಪ ಬಡಿಗೇರ, ಮಾನಪ್ಪ ಕಮ್ಮಾರ, ಶ್ರೀಶೈಲ ಬಡಿಗೇರ, ಕೃಷ್ಣಪ್ಪ ಪತ್ತಾರ, ವೀರೇಶ ಕಮ್ಮಾರ, ಕಾಶೀಮಪ್ಪ ಬಿಜಕಲ್ಲ, ನರಸಿಂಹ ಕಾರಟಗಿ, ಬಸವರಾಜ ಬಡಿಗೇರ, ಅಮರೇಶ ಬಡಿಗೇರ, ಮಾರುತಿ ಬಡಿಗೇರ, ಮಹಾಂತೇಶ ಬಡಿಗೇರ, ಅನೀಲ ಕಮ್ಮಾರ ಸೇರಿದಂತೆ ಇತರರಿದ್ದರು.
ಕಾಂಗ್ರೆಸ್ ಯುವ ಮುಖಂಡರಾದ ದೊಡ್ಡಬಸವನಗೌಡ ಪಾಟೀಲ್ ಬಯ್ಯಾಪುರ ಅವರು ಕುಷ್ಟಗಿ ತಾಲೂಕ ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಹಾಗೂ ಮೌನೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾ ಸಂಸದ ಮಾನೆ,ವಿರುದ್ಧ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುವಂತೆ ಆಗ್ರಹಿಸಿ ಸಂಸದೆ ಪ್ರಿಯಾಂಕಾಗೆ ಕರವೇ ಮನವಿ

ನೀರು ಬಳಕೆದಾರರ ಸಂಘಗಳು ಕಡೇ ಭಾಗದ ರೈತನಿಗೆ ನೀರು ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿಲಿ:ಮಧು ಜಿ.ಮಾದೇಗೌಡ